ಕಿಪ್ ಉಪಕರಣ

 ಪ್ರಯೋಗಶಾಲೆಯಲ್ಲಿ ಉಷ್ಣದ ಬಳಕೆ ಇಲ್ಲದೆಯೇ ದ್ರವವೊಂದು ಘನಪದಾರ್ಥದ ಮೇಲೆ ಕ್ರಿಯೆ ಜರುಗಿಸಿ ಅನಿಲ ಉತ್ಪಾದಿಸುವಂತೆ ಮಾಡಲು ಬಳಸುವ ಗಾಜಿನ ಉಪಕರಣ. ಉದಾ: ಹೈಡ್ರೊಕ್ಲೋರಿಕ್ ಆಮ್ಲ ಕಬ್ಬಿಣದ ಸಲ್ಫೈಡ್ ಮೇಲೆ ಕ್ರಿಯೆ ಜರುಗಿಸಿ ಹ್ಶೆಡ್ರೊಜನ್ ಸಲ್ಫೈಡ್ ಉತ್ಪಾದನೆ ಮಾಡುತ್ತಾರೆ. ಇದು ಗಾಜಿನಿಂದ ರಚಿತವಾಗಿದ್ದು ಇದರಲ್ಲಿ ಪ್ರತ್ಯೇಕಿಸಬಹುದಾದ ಎರಡು ಭಾಗಗಳಿವೆ. ಒಂದು ಭಾಗದಲ್ಲಿ (ಕೆಳಭಾಗ) ಎರಡು ಕೋಶಗಳು (ಂ ಮತ್ತು ಃ) ಇದ್ದು ಇವುಗಳ ನಡುವೆ ಒಂದು ಕಿರಿದಾದ ಪ್ರದೇಶದ ಮೂಲಕ ಸಂಪರ್ಕ ಏರ್ಪಡಿಸಿದೆ. ಂ ಯ ಪಾಶ್ರ್ವದಲ್ಲಿ ಒಂದು ತಿರುಗುನಲ್ಲಿ ಆ ಇದೆ. ಃ ಯ ಮೇಲ್ಭಾಗದಲ್ಲಿ ಗಾಜಿನ ಬಿರಡೆಯಿಂದ ಮುಚ್ಚಿರುವ ಒಂದು ಸಣ್ಣ ಬಾಯಿ ಇ ಇದೆ. ಇದರ ಕೆಳಕ್ಕೆ ಉದ್ದವಾದ ಮತ್ತು ಕ್ರಮೇಣ ಕಿರಿದಾಗುವ ಒಂದು ನಾಳವನ್ನು (ಈ) ಬೆಸೆದಿದೆ. ಇದು ಒಂದು ದೊಡ್ಡ ಪ್ರನಾಳದಂತಿದೆ. ಉಪಕರಣವನ್ನು ಉಪಯೋಗಿಸುವಾಗ ಅ ಯು ಂ ಯ ಮೇಲ್ಭಾಗದೊಡನೆ ಅನಿಲ ಹೊರಸೂಸಲು ಅವಕಾಶವಿಲ್ಲದ ರೀತಿಯಲ್ಲಿ ಜೋಡಿಸಲ್ಪಟ್ಟಿರುವುದು. ಆಗ ಇದರ ನಾಳದ ತುದಿ ಃ ಯ ತಳಕ್ಕಿಂತ ಸ್ವಲ್ಪ ಮೇಲಿರುವುದು.

 ಉಪಯೋಗಿಸುವ ರೀತಿ : ತಯಾರಿಸಬೇಕಾದ ಅನಿಲ ಹೈಡ್ರೊಜನ್ ಆಗಿರಲಿ. ಆಗ ಮಧ್ಯದ ಕೋಶದಲ್ಲಿ (ಂ) ಸ್ವಲ್ಪ ಹರಳು ಹರಳಾಗಿರುವ ಸತುವನ್ನು (ಗ್ರಾನ್ಯುಲೇಟಿಡ್ ಝಿಂಕ್) ಇಡಬೇಕು. ಂ ಯ ತಿರುಗುನಲ್ಲಿಯನ್ನು ತೆರೆದು ಅ ಯ ಮೂಲಕ ಸಜಲಸಲ್ಫ್ಯೂರಿಕ್ ಆಮ್ಲವನ್ನು ಃ ಕೋಶ ತುಂಬಿ ಂ ಯಲ್ಲಿರುವ ಸತು ಮುಚ್ಚುವಂತೆ ಹಾಕಬೇಕು. ಆಗ ಸತು ಆಮ್ಲದೊಡನೆ ವರ್ತಿಸಿ ಉತ್ಪನ್ನವಾದ ಹೈಡ್ರೊಜನ್‍ನಲ್ಲಿಯ ಮೂಲಕ ಹೊರಸೂಸುವುದು. ಇದನ್ನು ನೀರಿನ ಮೇಲೆ ಅನಿಲ ಶೇಖರ ಜಾಡಿಯಲ್ಲಿ ಶೇಖರಿಸಬಹುದು ಅಥವಾ ಬೇರೆ ಅಪೇಕ್ಷಿತ ರೀತಿಯಲ್ಲಿ ಉಪಯೋಗಿಸಬಹುದು. ಅನಿಲ ಬೇಡವಾದಾಗ ನಲ್ಲಿಯನ್ನು ಮುಚ್ಚಿದರೆ ಸಾಕು. ಅನಿಲಕ್ಕೆ ಹೊರ ಹೋಗಲು ಅವಕಾಶವಿಲ್ಲದೆ ಂ ಯಲ್ಲಿಯೇ ಶೇಖರಿಸಿ ಆಮ್ಲವನ್ನು ಕೆಳಗೆ ದಬ್ಬಿ ಸತು ಮತ್ತು ಆಮ್ಲಗಳ ಸಂಪರ್ಕವಿಲ್ಲದಂತಾಗಿ ಅನಿಲದ ಉತ್ಪತ್ತಿ ನಿಂತುಹೋಗುವುದು. ಪುನಃ ಅನಿಲ ಬೇಕಾದಾಗ ನಲ್ಲಿಯನ್ನು ತೆರೆದರೆ ಸರಿ. ಂ ಯಲ್ಲಿ ಶೇಖರಿಸಿದ್ದ ಹೈಡ್ರೊಜನ್ ಹೊರಸೂಸಿ ಆಮ್ಲ ಕೆಳಕ್ಕಿಳಿದು ಪುನಃ ಸತು-ಆಮ್ಲಗಳ ಸಂಪರ್ಕ ಏರ್ಪಟ್ಟು ಹೈಡ್ರೊಜನ್ ಉತ್ಪತ್ತಿ ಮತ್ತೆ ಆರಂಭವಾಗುವುದು.

 ಹೀಗೆ ಈ ಉಪಕರಣದಲ್ಲಿ ಅವಶ್ಯವಿದ್ದಾಗ ನಮಗೆ ಬೇಕಾದಷ್ಟು ಮಾತ್ರ ಅನಿಲವನ್ನು ಪಡೆದು ಅನಂತರ ಅನಿಲದ ಉತ್ಪಾದನೆಯನ್ನು ನಿಲ್ಲಿಸಬಹುದು. ಆದ್ದರಿಂದ ಅನಿಲ ನಮಗೆ ಅವಶ್ಯವಾದಾಗಲೆಲ್ಲ ಉಪಕರಣವನ್ನು ಹೊಸದಾಗಿ ಜೋಡಿಸುವುದು ತಪ್ಪುವುದಲ್ಲದೆ ರಾಸಾಯನಿಕ ವಸ್ತುಗಳ ಅಪವ್ಯಯವೂ ನಿಲ್ಲುವುದು. ಕ್ರಮೇಣ ಇದರಲ್ಲಿ ಸತು ಮತ್ತು ಆಮ್ಲಪೂರ್ಣವಾಗಿ ಉಪಯೋಗಿಸಲ್ಪಡುತ್ತವೆ. ಸತು ಮುಗಿದು ಹೋದರೆ ಹೊಸ ಸತುವನ್ನು ಂ ಯಲ್ಲಿ ತುಂಬಬೇಕು, ಆಮ್ಲ ಉಪಯೋಗಿಸಲ್ಪಟ್ಟರೆ ಃ ಕೋಶದ ಬಾಯಿ ತೆರೆದು ಇದರ ಮೂಲಕ ಅನುಪಯುಕ್ತ ಆಮ್ಲವನ್ನು ಹೊರಸುರಿದು ಹೊಸ ಆಮ್ಲದಿಂದ ಇದನ್ನು ಹಿಂದೆ ಹೇಳಿದಂತೆ ತುಂಬಬೇಕು.

 ಇತರ ಅನಿಲಗಳ ತಯಾರಿಕೆಯಲ್ಲಿ ಆಯಾ ಸಂದರ್ಭಕ್ಕೆ ಸೂಕ್ತವಾದ ಘನವಸ್ತು ಮತ್ತು ದ್ರವಗಳನ್ನು ಉಪಯೋಗಿಸಬೇಕು. ಉದಾಹರಣೆಗೆ ಹೈಡ್ರೊಜನ್ ಸಲ್ಫೈಡಿನ ತಯಾರಿಕೆಯಲ್ಲಿ ಫೆರಸ್ ಸಲ್ಫೈಡು ಮತ್ತು ಸಜಲ ಸಲ್ಫ್ಯೂರಿಕಾಮ್ಲಗಳನ್ನೂ, ಕಾರ್ಬನ್ ಡೈ ಆಕ್ಸೈಡ್ ತಯಾರಿಕೆಯಲ್ಲಿ ಅಮೃತಶಿಲೆಯ ಚೂರುಗಳು ಮತ್ತು ಸಜಲ ಹೈಡ್ರೋಕ್ಲೋರಿಕಾಮ್ಲವನ್ನೂ ಆಕ್ಸಿಜನ್ ತಯಾರಿಕೆಯಲ್ಲಿ ಆಕ್ಸೋನ್ (ಓಚಿ2ಔ2) ಬಿಲ್ಲೆಗಳು ಮತ್ತು ನೀರನ್ನೂ ಉಪಯೋಗಿಸಬೇಕು. 

(ಕೆ.ಎಸ್.ಬಿ.)

(ಪರಿಷ್ಕರಣೆ: ಹೆಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ